ಅಲೆವೂರು ದೊಡ್ಡಮನೆ ಕುಟುಂಬ ಇತಿಹಾಸ
editಸುಮಾರು 750 ರಿಂದ 800 ವರ್ಷದ ಇತಿಹಾಸ ಇರುವ ಅಲೆವೂರು ಗ್ರಾಮದ ದೊಡ್ಡಮನೆ ಕುಟುಂಬ ಅನಾಧಿ ಕಾಲದಿಂದಲೂ ಪ್ರಸಿದ್ಧಿಯಾಗಿದ್ದು, ಒಂದು ಕಾಲ ಗಟ್ಟ ದಲ್ಲಿ ಅರಸುಮನೆ ಹಿನ್ನಲೆ ಹೊಂದಿರುತ್ತಾರೆ, ಆ ಕಾಲದಿಂದಲೂ ದೈವ ಸಾನಿದ್ಯಾಗಳು ಗ್ರಹದ ಒಳಗಡೆ ಆರದಿಸುತಿದ್ದವು.
ದೈವಗಲಾದ ಮೂಲ ಮೈಸಂದಯ,ಸರಳ ಜುಮಾದಿ ಬಂಟ, ಮಾರ್ಲ್ ಜುಮಾದಿ ಬಂಟ,ದಾರಂಬಳ್ಳಲ್ಲಿ,ಜೋಡು ಪಂಜುರ್ಲಿ,ಪಂಜುರ್ಲಿ ಹಾಗೆ ಕುಟುಂಬದ ದೈವ ಗಳಾದ ವರ್ತೆ ಹಾಗೂ ಪಂಜುರ್ಲಿ ಯನ್ನೂ,ಹಾಗೆ ಇನ್ನೂ ಜಾಗದ ದೈವಗಳಾಗಿ ವಾಯುವ್ಯದಲ್ಲಿ ಚೌಂಡಿ- ರಾಹು,ಕೀಳು, ಈಶಾನ್ಯದಲ್ಲಿರುವ ಗುಳ್ಳಿಗ- ರಾಹು, ಬೊಬ್ಬರ್ಯ, ರಕೇಶ್ವರಿ, ಮಲೆ ಜಾಗದ ಪಂಜುರ್ಲಿ - ರಾಹು, ಮೂಡು ಮನೆ ಯಲ್ಲಿ ಬೈಕಡ್ತಿಪಂಜುರ್ಲಿ,ಕೀಳು ದೈವಗಳನ್ನು ಹಾಗೂ ನಾಗಾ ಬ್ರಹ್ಮ ಸ್ಥಾನ ವನ್ನು ಆರಾಧಿಸಿಕೊಂಡು ಬಂದಿರುತ್ತಾರೆ. ಪ್ರಸ್ತುತ ಇರುವ ಮನೆಯು 120 ವರ್ಷಗಳ ಅಧಿಕ ಕಾಲಘಟ್ಟದಲ್ಲಿ ನಿರ್ಮಾಣ ವಾಗಿದ್ದು ಸುತ್ತುಮಾಜಲು ರೀತಿಯ ದೊಡ್ಡಮನೆಯಾಗಿದೆ.
ಮನೆಯು ಅದಮಾರು ಮಠದ ಸಂಬಂಧವಿದ್ದು, ಹಾಗೆ ಅಲೆವೂರು ಗ್ರಾಮದ ದುರ್ಗಾಪರಮೇಶ್ವರಿ, ವಿಷ್ಣುಮೂರ್ತಿ,ಮುಚಿಲಕೊಡು ಸುಬ್ರಮಣ್ಯ ದೇವಸ್ಥಾನ,ಪಿಲಿಚಂಡಿ, ಕೋಟಿಚೆಣ್ಣಯ್ಯ ಗರಡಿ ಗೆ ನೇರ ಸಂಬಂಧವಿದೆ, ಹಾಗೆ ಗ್ರಾಮ ದೈವ ಬಬ್ಬಸ್ವಾಮಿ ಕಾಲಾವಧಿ ನೇಮದ ಬೆಳಗ್ಗಿನ ಜಾವ ಮನೆಗೆ ಹಾಲು ಕುಡಿಯಲು ಬರುವ ವಿಶೇಷ ಸಂಪ್ರದಾಯವನ್ನು ಹೊಂದಿದೆ.ಈ ಮುಖಾಂತರ ಮನೆಯು ಅಲೆವೂರು ಗ್ರಾಮದ ಒಂದನೇ ಲೆಪ್ಪಿನ ಮನೆ ಯಾಗಿ ಪ್ರಸಿದ್ದಿಯನ್ನು ಹೊಂದಿರುತ್ತದೆ.
ಕುಟುಂಬವು ಪ್ರತೀ ಕಾಲದಲ್ಲೂ ನಾಗಾ ಆರಾಧನೆ,ಸುಬ್ರಮಣ್ಯ ದೇವರ ಕಟ್ಟೆ ಪೂಜೆ,ಗ್ರಾಮದ ದುರ್ಗ ದೇವಿಗೆ 4ನೇ ನವರಾತ್ರಿ ಪೂಜೆ,ಕೃಷ್ಣಾಷ್ಟಮಿ ಪರ್ವಕಾಲದಲ್ಲಿ ಸೋಣಾರತಿ ಸೇವೆ, ದೈವ ಗಳಿಗೆ ಬೇಶ ಕಾಲದಲ್ಲಿ ತಂಬಿಲ ಸೇವೆಗಳನ್ನು ಮಾಡುತ್ತಾ ಬರುತ್ತಿದೆ.
ಪೂರ್ವ ಕಾಲದಲ್ಲಿ ಮನೆಯಲ್ಲಿ ಕಂಬಳ ಕೊಣ ಗಳು ಇದ್ದು,ಕಂಬಳ ಕೂಟಗಳಲ್ಲಿ ಭಾಗವಹಿಸಿದ ಇತಿಹಾಸವಿದೆ.