Translation needed edit

This Kannada text was posted in the article by User:Meghabangalore, in case anyone wants to translate it:

ಬಿ. ಅರ್. ಛಾಯಾ

ಹಿನ್ನಲೆ ಗಾಯನ, ಭಾವಗೀತೆ, ಕನ್ನಡ ಗೀತೆ, ಜನಪದ ಗೀತೆ, ಮಕ್ಕಳ ಗೀತೆ, ಶಾಸ್ತ್ರೀಯ ಗಾಯನ ಹೀಗೆ ಸಕಲಗಾಯನ ಪರಿಣತೆ ಬಿ. ಆರ್. ಛಾಯಾ. ಸಂಗೀತವು ಛಾಯಾ ಅವರಿದ್ದೆಡೆ ನೆರಳಿನಂತೆ ಜೊತೆಗೂಡಿರುತ್ತದೆ. ಹೀಗಾಗಿ ಅವರು ಸಂಗೀತದ ಛಾಯೆಯೇ ಹೌದು. ನಮ್ಮ ಬಿ. ಆರ್. ಛಾಯಾ ಅವರು ಹುಟ್ಟಿದ ದಿನ ಅಕ್ಟೋಬರ್ 16.

ಛಾಯಾ ಅವರು ಸಂಗೀತದಲ್ಲಿ ಪ್ರವರ್ಧಮಾನದ ಹಂತದಲ್ಲಿದ್ದ ಸಮಯದಲ್ಲಿ ಕೈಗಡಿಯಾರ ತಂತ್ರಜ್ಞೆಯಾಗಿ ಸಾರ್ವಜನಿಕ ಉದ್ದಿಮೆಯಲ್ಲಿದ್ದವರು. ಹೀಗಾಗಿ ಇಂತಹ ಕಲಾಕುಸುಮ ನಮ್ಮಂತಹ ಉದ್ಯ...ೋಗಿಗಳ ಸಮ್ಮುಖದಲ್ಲಿ ನಡೆದಾಡುತ್ತಿದ್ದಾರೆ ಎಂದು ಸಂಭ್ರಮ ಪಡುತ್ತಿದ್ದ ದಿನಗಳವು. ಆಕೆ ಅಷ್ಟು ಪ್ರತಿಭಾನ್ವಿತೆ ಹೇಗೋ ಏನೋ ಎಂದು ಅಳುಕು ಪ್ರದರ್ಶಿಸುತ್ತಿದ್ದ ನಮ್ಮಂತಹವರಿಗೆ, ತಮ್ಮ ಸಹಜ ಸ್ನೇಹ ಗುಣದಿಂದ ಆಪ್ತರಾಗಿಬಿಟ್ಟಿದ್ದರು. ಗೆಳಯರೊಡನೆ ಚಾರಣ, ಪ್ರವಾಸಗಳಿಗೆ ಹೆಜ್ಜೆ ಹಾಕಿ ನಮ್ಮೊಡನೆ ಒಬ್ಬ ಪ್ರತಿಭಾಶಾಲಿ ಇದ್ದಾರೆ ಎಂಬ ಗೌರವ ಮೂಡಿಸುತ್ತಿದ್ದರು ಕೂಡ. ಅಂದಿನ ದಿನಗಳಲ್ಲಿ ನಮ್ಮ ಸಮಾರಂಭಗಳಲ್ಲಿ ಆವರಿಂದಲೇ ಕನ್ನಡ ಸಂಪದದಲ್ಲಿ ಪ್ರಾರ್ಥನೆ. ಅವರ ಪ್ರಾರ್ಥನೆ ಕೇಳುವುದಕ್ಕಾದರೂ ಜನ ಬಂದಿರುತ್ತಾರೆ ಎಂಬ ವಿಶ್ವಾಸ ಕಾರ್ಯಕರ್ತರಿಗಿರುತ್ತಿತ್ತು. ಹಾಗೆಯೇ ಮುಂದೊಂದು ದಿನ ಅವರು ಸಿನಿಮಾದಲ್ಲಿ ಹಾಡುವುದು ಖಂಡಿತ ಎಂಬುದು ಅವರ ಪ್ರತಿಭೆಯನ್ನು ಬಲ್ಲವರಿಗೆ ಹೊಳೆದ ವಿಚಾರವಾಗಿತ್ತು.

‘ಸೊಬಗಿನ ಸೇರೆಮನೆಯಾಗಿಹೆ ನೀನು’, ‘ಜ್ಯೋತಿ ಹರಿಯಿತು ಇಂದು ನಮ್ಮಯ ಚೆಲುವ ಕನ್ನಡ ನಾಡಿಗೆ’ ಮುಂತಾಗಿ ಅವರು ಅಂದು ಹಾಡುತ್ತಿದ್ದ ಗೀತೆಗಳು ಇಂದೂ ಕಿವಿಯಲ್ಲಿ ರಿಂಗಣಿಸುತ್ತಿವೆ. “ನನ್ನ ಹರಣ ನಿನಗೆ ಶರಣ ಸಕಲ ಕಾರ್ಯ ಕಾರಣಾ, ನಿನ್ನ ಮನನದಿಂದ ತನನವೆನುತಿದೆ ತನು ಪಾವನಾ” ಎಂಬ ಬೇಂದ್ರೆಯವರ ಕವನ ಕೂಡಾ ಆಕಾಶವಾಣಿಯಲ್ಲಿ ಪದೇ ಪದೇ ಮೂಡಿಬರುತ್ತಿತ್ತು.

ಛಾಯಾ ಅವರ ಪ್ರತಿಭೆ ಸಂಗೀತದ ಮೇರುಪರ್ವತರಾದ ಇಳೆಯರಾಜಾ ಅವರನ್ನು ಸೆಳೆದಿತ್ತು. ಇಳೆಯರಾಜಾ ಅವರ ಸಂಗೀತ ನಿರ್ದೇಶನದ ಹಲವು ಹಾಡುಗಳನ್ನು ಛಾಯಾ ಹಾಡಿದರು. ಅಂದು ಸಂಗೀತದ ಹಿನ್ನಲೆಗಾಯನ ಧ್ವನಿಮುದ್ರಣ ನಡೆಯುತ್ತಿದುದೆಲ್ಲಾ ಮದರಾಸಿನಲ್ಲಿ. ಬೆಂಗಳೂರಿನಲ್ಲಿ ಆ ಸೌಲಭ್ಯ ಇನ್ನೂ ಒದಗಿರಲಿಲ್ಲ. ಇಂದಿನಂತೆ ಅಂದಿನ ದಿನದಲ್ಲಿ ಕಾಸಿಗೊಂದು, ಗಳಿಗೆಗೊಂದು ವಿಮಾನಗಳೂ ಇರಲಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡಿರಲು ಸಾಧ್ಯವಾಗಲಿಲ್ಲ. ಹೀಗಾಗಿ ಛಾಯಾ ಅವರು ಕನ್ನಡದಲ್ಲೇ ಅದೃಷ್ಟ ಪರೀಕ್ಷೆಗೆ ಕಾಯಲು ನಿರ್ಧರಿಸಿದರು.

ಛಾಯಾ ಅವರಿಗೆ ದೊಡ್ಡದೊಂದು ಅವಕಾಶ ನೀಡಿದವರು ವಿಜಯಭಾಸ್ಕರ್ ಮತ್ತು ಪುಟ್ಟಣ್ಣ ಕಣಗಾಲರು. ಅಮೃತ ಘಳಿಗೆಯಲ್ಲಿನ ‘ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’ , ‘ಪಾರ್ವತಿ ಪರಶಿವರ ಪ್ರಣಯ ಪ್ರಸಂಗ’ ಮುಂತಾದ ಗೀತೆಗಳು ಕನ್ನಡಕ್ಕೊಬ್ಬರು ಹಿನ್ನಲೆಗಾಯಕಿಯನ್ನು ಸೃಷ್ಟಿಸಿತ್ತು. ಮುಂದೆ ‘ಋತುಮಾನ ಸಂಪುಟದಿ ನವ ಕಾವ್ಯ ಬರೆದವಳೆ’, ‘ನಿನ್ನಂಥ ಅಪ್ಪ ಇಲ್ಲ’, 'ಕೂ ಕೂ ಎನುತಿದೆ ಬೆಳವಾ' ಮುಂತಾದ ಅನೇಕ ಸುಶ್ರಾವ್ಯ ಗೀತೆಗಳಿಗೆ ಛಾಯಾ ಧ್ವನಿಯಾದರು.

ಸುಗಮ ಸಂಗೀತ ಕ್ಷೇತ್ರದಲ್ಲೂ ಛಾಯಾ ಅವರು ಮಾಡಿದ ಸಾಧನೆ ಅಪಾರವಾದದ್ದು. ಇಂದಿನ ದಿನದ ಸುಗಮ ಸಂಗೀತ ಕಲಾವಿದರು ಮತ್ತೊಬ್ಬರು ಹಾಡಿದ ರಾಗದಲ್ಲೇ ಹಾಡಿ ಸುಗಮ ಸಂಗೀತವನ್ನೂ ಆರ್ಕೆಸ್ಟ್ರಾ ಸಂಗೀತವನ್ನೇ ಮಾಡಿರುವುದಕ್ಕೂ, ಛಾಯಾ ಅವರು ಸುಗಮ ಸಂಗೀತವನ್ನು ಬೆಳಗಿದ್ದಕ್ಕೂ ಸಾಕಷ್ಟು ವೆತ್ಯಾಸವಿದೆ. ಛಾಯಾ ಅವರು ಕಂಡುಕೊಂಡ ಸಂಗೀತ, ಹೊಸ ಹೊಸ ಗೀತೆಗಳು, ಅವಕ್ಕೆ ಅವರು ನೀಡಿದ ಸೃಜನೆ ಇವೆಲ್ಲವೂ ಗಮನಾರ್ಹವಾದದ್ದು. ‘ಹೂವು ಹೊರಳುವುವು ಸೂರ್ಯನವರೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ’, ‘ಒಂದು ಮುಂಜಾವಿನಲ್ಲಿ ತುಂತುರಿನ ಸೋನೆ ಮಳೆ’, ‘ತಪ್ಪಿ ಹೋಯಿತಲ್ಲೇ’, ‘ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’, 'ಭಾಗ್ಯದ ಬಳೆಗಾರ ಹೋಗಿ ಬಾ ನಂತವರೀಗೆ', 'ಮುಂಗಾರಿನ ಅಭಿಷೇಕಕೆ' ಮುಂತಾದ ಅನೇಕ ಸುಶ್ರಾವ್ಯ ಗೀತೆಗಳು ಛಾಯಾ ಅವರ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿವೆ.

ಸಂಗೀತ ಕ್ಷೇತ್ರದಲ್ಲಿ ಬಿ ಆರ್ ಛಾಯಾ ಅವರು ಮಾಡಿರುವ ಮತ್ತೊಂದು ಗಮನಾರ್ಹ ಸಾಧನೆಯೆಂದರೆ ಇಂದಿನ ಮಕ್ಕಳಿಗೆ ಅಲಭ್ಯವಾಗಿದ್ದ ಹಳೆಯ ಕನ್ನಡ ಹಾಡುಗಳಲ್ಲಿನ ಕನ್ನಡದ ಕಂಪನ್ನು ಮತ್ತೊಮ್ಮೆ ಕಾಣಸಿಗುವಂತೆ ಮಾಡಿದ್ದು. ಛಾಯಾ ಅವರ ‘ಕಿನ್ನರಿ’ ಗೀತೆಗಳ ಪ್ರಯತ್ನ ಅತ್ಯಂತ ಶ್ಲಾಘನೀಯವಾದದ್ದು.

ಛಾಯಾ ಅವರು ನೀಡಿರುವ ಸಂಗೀತ ಕಾರ್ಯಕ್ರಮಗಳು, ಸಿನಿಮಾ, ದೂರದರ್ಶನ, ಸುಗಮ ಸಂಗೀತ ಮತ್ತು ಕ್ಯಾಸೆಟ್ಟುಗಳಿಗೆ ಹಾಡಿರುವ ಗೀತೆಗಳು ಹಲವಾರು ಸಹಸ್ರ ಸಂಖ್ಯೆಗಳನ್ನು ಮೀರುವಂತದ್ದಾಗಿವೆ. ದೇಶ, ವಿದೇಶಗಳಲ್ಲಿ ಅವರ ಕಾರ್ಯಕ್ರಮಗಳು ನಿರಂತರ ಜನಾಕರ್ಷಣೆಯನ್ನು ಗಳಿಸಿಕೊಳ್ಳುತ್ತಿವೆ.

Phil Bridger (talk) 08:36, 16 November 2011 (UTC)Reply

A Commons file used on this page or its Wikidata item has been nominated for deletion edit

The following Wikimedia Commons file used on this page or its Wikidata item has been nominated for deletion:

Participate in the deletion discussion at the nomination page. —Community Tech bot (talk) 06:27, 30 June 2021 (UTC)Reply